ಈ ಶತಮಾನದ ವೀರ ಮದಕರಿ ( ವೀರ ಮದಕರಿ ಎಂದೂ ಕರೆಯುತ್ತಾರೆ) ಸುದೀಪ್ ನಿರ್ದೇಶಿಸಿದ 2009 ರ ಭಾರತೀಯ ಕನ್ನಡ ಭಾಷೆಯ ಸಾಹಸ ಚಿತ್ರವಾಗಿದೆ . ಈ ಚಿತ್ರದಲ್ಲಿ ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚೊಚ್ಚಲ ನಟಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಮುದ್ರಿಕೆಯನ್ನು ಎಂ. ಎಂ. ಕೀರವಾಣಿ ಸಂಯೋಜಿಸಿದ್ದಾರೆ ಮತ್ತು ದಿನೇಶ್ ಗಾಂಧಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಲನಚಿತ್ರವು 20 ಮಾರ್ಚ್ 2009 ರಂದು ಬಿಡುಗಡೆಯಾಯಿತು. ಈ ಚಿತ್ರವು ಎಸ್.ಎಸ್. ರಾಜಮೌಳಿಯವರ ನಿರ್ದೇಶನದ, ರವಿತೇಜ ಅಭಿನಯದ ತೆಲುಗಿನ ಬ್ಲಾಕ್‌ಬಸ್ಟರ್ ವಿಕ್ರಮಾರ್ಕುಡು ಚಿತ್ರದ ರೀಮೇಕ್ ಆಗಿದೆ. == ಕಥಾವಸ್ತು == ಮದಕರಿ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿದ್ದು, ಸ್ಥಳೀಯ ರೌಡಿ ಬಾಬ್ಜಿ ಮತ್ತು ಅವನ ಮಗನಿಂದ ಹತ್ಯೆಗೀಡಾಗುತ್ತಾನೆ. ಅವನ ಮರಣದ ನಂತರ, ಅವನ ಮಗಳನ್ನು ನಿಗೂಢವಾಗಿ ಮದಕರಿಯಂತೆ ಕಾಣುವ ಕಳ್ಳ ಸತ್ಯರಾಜುವಿನ ಬಾಗಿಲಲ್ಲಿ ಬಿಡಲಾಗುತ್ತದೆ. ಇಷ್ಟವಿಲ್ಲದೆ, ಅವನು ಅವಳನ್ನು ನೋಡಿಕೊಳ್ಳಲು ಪ್ರಾರಂಭಿಸುತ್ತಾನೆ. ಮದಕರಿ ಮತ್ತು ಅವನ ಹೋಲಿಕೆಯ ಬಗ್ಗೆ ತಿಳಿದಾಗ, ಅವನು ಬಾಬ್ಜಿ ಮತ್ತು ಅವನ ಮಗನಿಂದ ಸೇಡು ತೀರಿಸಿಕೊಳ್ಳಲು ನಿರ್ಧರಿಸುತ್ತಾನೆ. == ತಾರಾಗಣ == ಸುದೀಪ್ ರಾಗಿಣಿ ದ್ವಿವೇದಿ ಟೆನಿಸ್ ಕೃಷ್ಣ ಜೆರುಶಾ ಕ್ರಿಸ್ಟೋಫರ್ ದೇವರಾಜ್‌ ದೊಡ್ಡಣ್ಣ ಅರುಣ್ ಸಾಗರ್ ಗೋಪಿನಾಥ್ ಭಟ್ ಧರ್ಮ ವಾಣಿಶ್ರೀ ಸೂರ್ಯನಾರಾಯಣ ವಾಲಿ ಜಯಶ್ರೀ ರಾವ್ ಸಿಮ್ರನ್ ಖಾನ್ ಶೈಲಜಾ ಜೋಶಿ == ನಿರ್ಮಾಣ == ಈ ಚಿತ್ರವು ಮೈ ಆಟೋಗ್ರಾಫ್ (2006) ಮತ್ತು ನಂ 73, ಶಾಂತಿ ನಿವಾಸ (2007) ನಂತರ ಸುದೀಪ್ ಅವರ ನಿರ್ದೇಶನದ ಮೂರನೇ ಚಿತ್ರವಾಗಿದೆ. ಚಿತ್ರದಲ್ಲಿ ಸುದೀಪ್ ಅವರು ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ,ಒಬ್ಬ ಖಳನಾಯಕನ ಪಾತ್ರಕ್ಕೆ ಧ್ವನಿ ನೀಡಿದ್ದಾರೆ ಮತ್ತು ಕೆಲ ಹಾಡುಗಳಿಗೂ ಧ್ವನಿ ನೀಡಿದ್ದಾರೆ. ವಿಕ್ರಮಾರ್ಕುಡು ಚಿತ್ರದ ರಿಮೇಕ್ ಆಗಿರುವ ಈ ಚಿತ್ರವು ಅದರ ತೆಲುಗು ಪ್ರತಿರೂಪದ ಮೂಲ ಸ್ಕ್ರಿಪ್ಟ್ ಅನ್ನು ಯಶಸ್ವಿಯಾಗಿ ಅನುಸರಿಸುತ್ತದೆ. == ಧ್ವನಿಮುದ್ರಿಕೆ == ಈ ಚಿತ್ರದ 6 ಹಾಡುಗಳನ್ನು ಎಂ.ಎಂ. ಕೀರವಾಣಿ ಸಂಯೋಜಿಸಿದ್ದಾರೆ. ಮೂಲ ಚಿತ್ರದಿಂದ ತಮ್ಮ ಹಾಡುಗಳನ್ನು ಮರುಬಳಕೆ ಮಾಡಿದ್ದಾರೆ. == ವಿಮರ್ಶಾತ್ಮಕ ಪ್ರತಿಕ್ರಿಯೆ == ರೆಡಿಫ್ ನ ಆರ್ ಜಿ ವಿಜಯಸಾರಥಿ ಅವರು ಚಿತ್ರಕ್ಕೆ 5 ಸ್ಟಾರ್‌ಗಳಲ್ಲಿ 2.5 ಅಂಕಗಳನ್ನು ನೀಡಿದ್ದಾರೆ ಮತ್ತು "ಸುದೀಪ್ ಅವರ ಜೊತೆಗೆ ಚಿತ್ರದ ಪ್ರಮುಖ ಆಕರ್ಷಣೆಯಾಗಿರುವ ಬಾಲನಟಿ ಜೋಯ್ಷಾ ಕ್ರಿಸ್ಟೋಫರ್ ಅವರ ಅಭಿನಯ ಅದ್ಭುತವಾಗಿದೆ. ಹೊಸಬರಾದ ರಾಗಿಣಿ ಪ್ರಭಾವಶಾಲಿಯಾಗಿದ್ದಾರೆ ಮತ್ತು ಗೋಪಿನಾಥ್ ಮತ್ತು ಸೂರಿಯವರೂ ಜೋರಾಗಿದ್ದಾರೆ. ಟೆನ್ನಿಸ್ ಕೃಷ್ಣ ಸರಿಹೊಂದುತ್ತಾರೆ. ಧರ್ಮ, ದಿನೇಶ್ ಗಾಂಧಿ ಮತ್ತು ಲೇಡಿ ಇನ್ಸ್‌ಪೆಕ್ಟರ್ ಉತ್ತಮ ಕೆಲಸ ಮಾಡಿದ್ದಾರೆ" ಎಂದಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವಿಮರ್ಶಕರೊಬ್ಬರು ಹೀಗೆ ಬರೆದಿದ್ದಾರೆ: "ಸುದೀಪ್ ಅವರ ಅಭಿಮಾನಿಗಳಿಗೆ ಉತ್ತಮ ಮನರಂಜನೆ." ಬೆಂಗಳೂರು ಮಿರರ್‌ನ ವಿಮರ್ಶಕರೊಬ್ಬರು ಹೀಗೆ ಬರೆದಿದ್ದಾರೆ "ವಿಕ್ರಮಾರ್ಕುಡು ಚಿತ್ರದಲ್ಲಿನ ಟ್ಯೂನ್‌ಗಳು ಒಂದೇ ಆಗಿವೆ; ರಿಮೇಕ್ ಚಿತ್ರಗಳಿಗೆ ಮೂಲ ಟ್ಯೂನ್‌ಗಳನ್ನು ಉಳಿಸಿಕೊಂಡಿದ್ದಾರೆ. ಈ ಚಿತ್ರವು ಸಕಾರಾತ್ಮಕ ಪರಿಣಾಮ ಬೀರುವ ಏಕೈಕ ವ್ಯಕ್ತಿ ರಾಗಿಣಿ. ನೀವು ಸುದೀಪ್ ಅವರ ಹಾರ್ಡ್‌ಕೋರ್ ಅಭಿಮಾನಿ ಅಲ್ಲದಿದ್ದರೆ, ವೀರ ಮದಕರಿ ನೋಡಿದ ಮೇಲೆ ತಲೆನೋವಿನೊಂದಿಗೆ ಹೊರಬರುವುದು ಖಚಿತ". ಟೈಮ್ಸ್ ಆಫ್ ಇಂಡಿಯಾದ ವಿಮರ್ಶಕರೊಬ್ಬರು, ಚಿತ್ರಕ್ಕೆ 5 ನಕ್ಷತ್ರಗಳಲ್ಲಿ 3 ಅಂಕಗಳನ್ನು ನೀಡಿದ್ದಾರೆ ಮತ್ತು "ಮದಕರಿಯು ಗೂಂಡಾಗಳಿಂದ ಕೊಲ್ಲಲ್ಪಟ್ಟಾಗ, ಮದಕರಿಯನ್ನು ಹೋಲುವ ಸತ್ಯರಾಜ್, ಅವನ ವೇಶದಲ್ಲಿ ಗೂಂಡಾಗಳನ್ನು ತೊಡೆದುಹಾಕುತ್ತಾನೆ ಮತ್ತು ದೇವಗಢಕ್ಕೆ ಶಾಂತಿಯನ್ನು ಮರುಸ್ಥಾಪಿಸುತ್ತಾನೆ. ಟೆನ್ನಿಸ್ ಕೃಷ್ಣ ಅವರು ಉತ್ತಮವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಸಂಗೀತ ನಿರ್ದೇಶಕ ಕೀರವಾಣಿ ಅವರು ತಮ್ಮ ಖ್ಯಾತಿಗೆ ಅನುಗುಣವಾಗಿ ನಡೆದುಕೊಂಡಿಲ್ಲ" ಎಂದಿದ್ದಾರೆ. == ಬಾಕ್ಸ್ ಆಫೀಸ್ == ಈ ಶತಮಾನದ ವೀರ ಮದಕರಿ 100 ದಿನಗಳನ್ನು ಪೂರೈಸಿತು ಮತ್ತು 2009 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರವಾಯಿತು. ಈ ಚಿತ್ರವು ಸುದೀಪ್ ಅವರ ಸತತ ಸೋಲುಗಳ ನಂತರ ಕಂಬ್ಯಾಕ್ ಮಾಡಿದ ಚಿತ್ರವಾಗಿತ್ತು. == ಪ್ರಶಸ್ತಿಗಳು == 2ನೇ ಸುವರ್ಣ ಚಲನಚಿತ್ರ ಪ್ರಶಸ್ತಿಗಳು:- ನೆಚ್ಚಿನ ನಾಯಕ - ವಿಜೇತ - ಸುದೀಪ್ ಅತ್ಯುತ್ತಮ ಚೊಚ್ಚಲ ನಟಿ - ವಿಜೇತ - ರಾಗಿಣಿ ದ್ವಿವೇದಿ ಅತ್ಯುತ್ತಮ ನೃತ್ಯ ಸಂಯೋಜಕ - ನಾಮನಿರ್ದೇಶಿತ - ಪ್ರದೀಪ್ ಆಂಟೋನಿ ವರ್ಷದ ಸ್ಟಾರ್ ಜೋಡಿ - ನಾಮನಿರ್ದೇಶನ - ಸುದೀಪ್ ಮತ್ತು ರಾಗಿಣಿ ದ್ವಿವೇದಿ ಜೀ ಕನ್ನಡ ಇನ್ನೋವೇಟಿವ್ ಫಿಲ್ಮ್ ಅವಾರ್ಡ್ಸ್:- ವಿಶೇಷ ತೀರ್ಪುಗಾರರ ಪ್ರಶಸ್ತಿ - ವಿಜೇತ - ಸುದೀಪ್ ಅತ್ಯುತ್ತಮ ಬಾಲ ನಟಿ - ವಿಜೇತ - ಬೇಬಿ ಜೋರುಶಾ ಸೌತ್ ಸ್ಕೋಪ್ ಸಿನಿ ಪ್ರಶಸ್ತಿಗಳು:- ಕನ್ನಡದ ಅತ್ಯುತ್ತಮ ಹಾಸ್ಯನಟ - ನಾಮನಿರ್ದೇಶಿತ - ಟೆನ್ನಿಸ್ ಕೃಷ್ಣ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಈ ಶತಮಾನದ ವೀರ ಮದಕರಿ @ ಐ ಎಮ್ ಡಿ ಬಿ